ಅಮೇರಿಕಾದಲ್ಲಿ ಉಪ್ಪಿ-೨ಗೆ ಪ್ರಶಂಸೆ
Posted date: 17 Sat, Oct 2015 – 09:00:54 AM

ಗ್ಯಾಪ್ ನಂತರ ನಿರ್ದೇಶನ ಮಾಡಿರುವ ಉಪೇಂದ್ರರವರ ಉಪ್ಪಿ-೨ ಚಿತ್ರವು ವಿದೇಶದಲ್ಲಿ ತೆರೆಕಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಚಾರ ಸಲುವಾಗಿ ಉಪ್ಪಿ ಅಮೇರಿಕಾಗೆ ಭೇಟಿಕೊಟ್ಟಾಗ ಅಲ್ಲಿನ  ಕನ್ನಡ ಜನರ ಪ್ರೀತಿನೋಡಿ ದಂಗಾಗಿದ್ದಾರೆ. ಅದು ಏನು ಎಂಬುದನ್ನು ಅವರ ಮಾತುಗಳಲ್ಲೆ ಕೇಳಿ. ರಂಗಿತರಂಗ ನಂತರ ಉಪ್ಪಿ ಚಿತ್ರವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ. ಏಕಕಾಲದಲ್ಲಿ  ಚಿತ್ರಗಳು ಬಿಡುಗಡೆಯಾದಲ್ಲಿ ನಿರ್ಮಾಪಕರಿಗೆ ಹಣ ಬರುತ್ತದೆ. ಸಂವಾದ ಕಾರ್ಯಕ್ರಮದಲ್ಲಿ   ಇಬ್ಬರ ಪಾತ್ರ ಒಬ್ಬರಾಗಿರುತ್ತಾರಾ ಎಂಬ ಹಲವು  ಪ್ರಶ್ನೆಗಳಿಗೆ ಉತ್ತರ ಕೊಡಲಾಯಿತು. ಚಿತ್ರದ ಯಶಸ್ಸಿನಿಂದ ನಿರ್ದೇಶನ, ನಿರ್ಮಾಣ ಮಾಢುವ ಇಂಗಿತ ಇದೆ. ಅದು ಯಾವಾಗ ಅಂತ ಗೊತ್ತಿಲ್ಲ. ಉಪ್ಪಿ-೩ ಎಂದು ಬರುತ್ತದೆ ಅಂತ ಕೇಳುತ್ತಿದ್ದಾರೆ. ಉಪ್ಪಿ-೨ ಚಿತ್ರ ಉಪ್ಪಿ-೩ ಆಗಿದೆ ಎಂಬುದಾಗಿ ಮಜಾಟಾಕೀಸಿನಲ್ಲಿ ಹೇಳಿದ್ದಾರೆ. ಅದು ದೊಡ್ಡ ದೇಶ. ಅಲ್ಲಿ ಕನ್ನಡದ ಚಿತ್ರಗಳು ಹೆಚ್ಚು ಬರಬೇಕು. ಹದಿನೆಂಟು ಘಂಟೆ ಪ್ರಯಾಣ ತ್ರಾಸವಾಗುತ್ತದೆ. ಗ್ಯಾಪ್ ಮಾಡಿಕೊಂಡು ನ್ಯೂಜರ್ಸಿ, ನ್ಯೂಜಿಲೆಂಡ್, ಚಿಕಾಗೋ, ಬಾಸ್ಟನ್, ಕ್ಯಾಲಿಫೋರ್ನಿಯಾಗೆ ಭೇಟಿ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ  ಇದ್ದರೂ ಬಿಡದೆ ಕರೆದುಕೊಂಡು ಕನ್ನಡ ಸಂಘವನ್ನು ಉದ್ಘಾಟನೆ ಮಾಡಿಸಿದ್ದಾರೆ. ಅಲ್ಲಿನ ನೋಟ, ಜನರನ್ನು ನೋಡುವುದೆ ಆನಂದ.  ಸದ್ಯ ಕಾಂಚನಾ-೨, ಇನ್ನು ಎರಡು ಚಿತ್ರಗಳ ಮಾತುಕತೆ ನಡೆಯುತ್ತಿದೆ. ನಿರ್ದೇಶನ ಸದ್ಯಕ್ಕಿಲ್ಲ. ಪ್ರಿಯಾಂಕ ಚಿತ್ರವನ್ನು ನಿರ್ದೇಶನ ಮಾಡಬೇಕಾದರೆ ಮಕ್ಕಳನ್ನು  ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಬೇಕಷ್ಟೆ ಅಂತ ನಗುತ್ತಾರೆ ಉಪೇಂದ್ರ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed